ಕನ್ನಡ ಕಾಗುಣಿತವು ಕನ್ನಡ ಅಕ್ಷರಮಾಲೆಯಲ್ಲಿನ ಪ್ರತಿಯೊಂದು ವ್ಯಂಜನಗಳಿಗೂ ಪ್ರತಿಯೊಂದು ಸ್ವರವನ್ನು ಸೇರಿಸುವುದು ಹೇಗೆ ಎಂದು ತಿಳಿಸಿಕೊಡುವ ವ್ಯಾಕರಣದ ಕ್ರಮ. ಉದಾ: ಸ್ ವ್ಯಂಜನಕ್ಕೆ ಅ ಸ್ವರವನ್ನುಸೇರಿಸಿದಾಗ, ಸ ಬರುತ್ತದೆ. ರ್ ವ್ಯಂಜನಕ್ಕೆ ಓ ಸ್ವರವನ್ನು ಸೇರಿಸಿದಾಗ, ರೋ ಬರುತ್ತದೆ. ಒಂದು ವ್ಯಂಜನದ ಸಂಪೂರ್ಣ ಕಾಗುಣಿತ, ಆ ವ್ಯಂಜನದ ಎಲ್ಲಾ ಸ್ವರಗಳೊಂದಿಗಿನ ಸಂಬಂಧವನ್ನು ತೋರಿಸುತ್ತದೆ. == ಕಾಗುಣಿತ ಬಳಕೆ ಯಾಕೆ ಬೇಕು? == ಭಾರತದ ಯಾವುದೇ ಭಾಷೆಯಲ್ಲಿ ವಾಕ್ಯಗಳಲ್ಲಿ ಹೃಸ್ವ ಮತ್ತು ದೀರ್ಘ ಅಕ್ಷರಗಳನ್ನು ಬಳಸುವಾಗ ತುಂಬ ಜಾಗ್ರತೆಯಿಂದಿರಬೇಕು. ತಪ್ಪು ಪದಗಳ ಬಳಕೆಯಿಂದ ತಪ್ಪು ಅರ್ಥಗಳು ಬರುವ ಪದಗಳನ್ನು ಬಳಸುತ್ತೇವೆ. ಉದಾಹರಣೆಗೆ ಕನ್ನಡದಲ್ಲಿ ಬಳಕೆಯಾದ ಕೆಲವು ವಾಕ್ಯಗಳನ್ನು ಗಮನಿಸಬಹುದು. ಅವನಿಗೆ ಬಲ ಇದೆ, ಅವನಿಗೆ ಬಾಲ ಇದೆ. ನನಗೆ ಪುರಿ ಕೊಡಿ, ನನಗೆ ಪೂರಿ ಕೊಡಿ. ಬಿಡಿ ಕಾಸು ಸಿಕ್ಕಿದರೆ ಬೀಡಿ ತೆಗೆದುಕೋ. ಬಹಳ ಮೆರೆಯುವವನು ಮೇರೆ ತಪ್ಪುತ್ತಾನೆ. ನಾವು ಬೇರೆ ಬೇರೆ ಜನಗಳ ಜೊತೆ ಬೆರೆಯಬೇಕು. ಮೊದಲು ಮನೆಯನ್ನು ಹೊಗು ಆಮೆಲೆ ತೋಟಕ್ಕೆ ಹೋಗು == ಕಾಗುಣಿತ ಪಟ್ಟಿ == == ಕನ್ನಡ ಕಾಗುಣಿತ ಸಂಪೂರ್ಣ ಪಟ್ಟಿ == == ಕನ್ನಡ ಕಾಗುಣಿತ ಅಕ್ಷರ ಚಿತ್ರ ಗ್ಯಾಲರಿ == == ಉಲ್ಲೇಖ ==